ಕೆಎಲ್ಇ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ
ಹುಬ್ಬಳ್ಳಿ: ಸದೃಢ ಭಾರತ ನಿರ್ಮಾಣಕ್ಕೆ ನಿಮ್ಮ ಮತ ಚಲಾಯಿಸಿ. ಅಮೂಲ್ಯ ಮತವನ್ನು ಹಾಕಲು ಮರೆಯಬೇಡಿ ಎಂದು ನಾಟಕ ಮಾಡುವ ಮೂಲಕ ಕೆಎಲ್ಇ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಮತದಾನ ಜಾಗೃತಿ ಮೂಡಿಸಿದರು. ಕೆಎಲ್ಇಯಿಂದ ಜಾಗೃತಿ ಮೆರವಣಿಗೆ ಪ್ರಾರಂಭಗೊಂಡು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಾಹಿತ್ಯ ಹಾಗೂ ಸಂಗೀತದ ಮೂಲಕ ವಿದ್ಯಾರ್ಥಿಗಳು ಮತದಾನ ಜಾಗೃತಿ ಮೂಡಿಸಿದರು. ಜಾತಿ, ಹೆಂಡ, ಹಣಕ್ಕೆ ನಿಮ್ಮ ಮತ ಮಾರಿಕೊಳ್ಳದಿರಿ. ಯೋಗ್ಯ ಅಭ್ಯರ್ಥಿಗೆ ನಿಮ್ಮ ಮತ ಚಲಾಯಿಸಿ. ಆಸೆ, ಆಮಿಷಗಳಿಗೆ ಬಲಿಯಾಗದೆ ಮತ ಚಲಾಯಿಸಿ ಎಂದು ಘೋಷಣೆ ಕೂಗಿದರು.