ಅಲ್ಲಿ ಜಲ ಪ್ರಳಯ, ಇಲ್ಲಿ ಅನಾವೃಷ್ಟಿಯಿಂದ ಬಣ ಬಣ... ಏನಿದು ವರುಣನ ಆಟ! - ಸರ್ಕಾರದ ನಿರ್ಲಕ್ಷ್ಯ
ರಣಭೀಕರ ಮಳೆಗೆ ಉತ್ತರ ಕರ್ನಾಟಕ ತತ್ತರಿಸಿದ್ದು, ಜಲ ಪ್ರಳಯವೇ ಉಂಟಾಗಿದೆ. ಜನರು ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಮಳೆರಾಯ ಅಲ್ಲಿ ತನ್ನ ಪ್ರತಾಪ ತೋರಿದ್ದಾನೆ. ಅದರೆ ಮಧ್ಯ ಕರ್ನಾಟಕದ ಚಿತ್ರದುರ್ಗದಲ್ಲಿ ಮಳೆ ಇಲ್ಲದೆ ಇಲ್ಲಿರುವ ಜಲಾಶಯಗಳು ಬರಿದಾಗಿವೆ. ರಂಗಯ್ಯನ ದುರ್ಗ ಜಲಾಶಯ ಖಾಲಿಯಾಗಿದೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಆ ಜಲಾಶಯ ಯಾರ ಸುಪರ್ದಿಗೂ ಬರದೇ ಅನಾಥವಾಗಿದೆ.