ಉದ್ಭವ ಕಾರ್ಯಕ್ರಮದಲ್ಲಿ ರಂಗು ತಂದ ರಂಗೋಲಿ ಸ್ಪರ್ಧೆ.. - ಫಾತಿಮಾ ಕಾಲೇಜು
ಆಧುನಿಕ ದಿನಮಾನಗಳಲ್ಲಿ ನಮ್ಮ ಸಂಪ್ರದಾಯ ಕಣ್ಮರೆಯಾಗುತ್ತಿರುವ ಹಿನ್ನೆಲೆ ಅದನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯ ಫಾತಿಮಾ ಕಾಲೇಜು ವತಿಯಿಂದ 'ಉದ್ಭವ 2019' ಕಾರ್ಯಕ್ರಮವನ್ನು ಆಯೋಜನೆ ಮಾಡಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆ, ಚಿತ್ರಕಲೆ, ಮೆಹಂದಿ, ಫುಡ್ ಫೆಸ್ಟ್ ಸೇರಿ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳನ್ನೂ ಸಹ ನಡೆಸಲಾಯಿತು. ಅವಳಿ ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ, ಆನಂದಿಸಿದರು. ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಕ ವೃಂದ ಪ್ರಶಸ್ತಿ ನೀಡಿ ಗೌರವಿಸಿತು.