ದಾವಣಗೆರೆಯಲ್ಲಿ ಮತ್ತೆ ವೈರಾಣುವಿನ ಆರ್ಭಟ: ಮೂವರು ಕೊರೊನಾ ವಾರಿಯರ್ಸ್ಗಳಿಗೆ ಸೋಂಕು - ದಾವಣಗೆರೆ
ದಾವಣಗೆರೆ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಸೋಂಕು ಹರಡಲಾರಂಭಿಸಿದೆ. ನಗರ ಪ್ರದೇಶದಜನರನ್ನು ಕಾಡುತ್ತಿದ್ದ ಸೋಂಕು ಹಳ್ಳಿಗಳಿಗೂ ಪಸರಿಸುತ್ತಿದೆ. ಇದೀಗ ಮೂವರು ಕೊರೊನಾ ವಾರಿಯರ್ಸ್ಗಳಿಗೆ ಸೋಂಕು ತಗುಲಿರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಎಂಸಿಸಿ ಬಿ ಬ್ಲಾಕ್‌ನ ಪೊಲೀಸ್ ಸಿಬ್ಬಂದಿ, ಜಗಳೂರಿನ ಪೌರ ಕಾರ್ಮಿಕ ಹಾಗೂ ಸಿ.ಜೆ.ಆಸ್ಪತ್ರೆಯ ಎಕ್ಸ್-ರೇ ಟೆಕ್ನಿಷಿಯನ್ನಲ್ಲೂ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 325 ಮಂದಿಗೆ ಸೋಂಕು ಕಾಣಿಸಿದೆ. 266 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 48 ಸಕ್ರಿಯ ಪ್ರಕರಣಗಳಿವೆ. ಈ ಬಗ್ಗೆ ನಮ್ಮ ಪ್ರತಿನಿಧಿ ವಾಕ್ ತ್ರೂ ವಿವರವಾದ ಮಾಹಿತಿ ನೀಡಿದ್ದಾರೆ.