ಆಹಾರ ಅರಸಿ ಬಂದ ಹೆಬ್ಬಾವು: ಹೆಗಲಮೇಲಿಟ್ಟುಕೊಂಡು ಸೆಲ್ಫಿ - ಮಂಡ್ಯದಲ್ಲಿ ಹೆಬ್ಬಾವು ಪತ್ತೆ
ಶ್ರೀ ರಂಗಪಟ್ಟಣದ ಎಚ್.ಪಿ ಪೆಟ್ರೋಲ್ ಬಂಕ್ ಬಳಿ 12 ಅಡಿ ಉದ್ದವಿದ್ದ, 50 ಕೆಜಿ ತೂಕವಿದ್ದ ಹೆಬ್ಬಾವನ್ನು ಉರಗ ತಜ್ಞ ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟದ್ದಾರೆ. ಆಹಾರ ಅರಸಿ ಬಂದ ಹೆಬ್ಬಾವನ್ನು ಗಮನಿಸಿದ ನೌಕರರು ಕೂಡಲೇ ಉರಗ ತಜ್ಞ ಸ್ನೇಕ್ ಸುಲ್ತಾನ್ ಎಂಬವರನ್ನು ಕರೆಸಿದ್ದಾರೆ. ಹಾವನ್ನು ನೋಡಲು ಜನ ಮುಗಿ ಬಿದ್ದಿದ್ದು, ಹೆಗಲ ಮೇಲೆ ಹಾಕಿಕೊಂಡು ಪೋಟೋ ತೆಗೆಸಿಕೊಂಡು ಸಂಭ್ರಮಿಸಿದರು.
Last Updated : Nov 2, 2019, 10:57 AM IST