ರಸ್ತೆ ಕಾಮಗಾರಿ ವೇಳೆ ಪೈಪ್ ಒಡೆದು ಬಾನೆತ್ತರಕ್ಕೆ ಚಿಮ್ಮಿದ ನೀರು: ವಿಡಿಯೋ ವೈರಲ್ - ಬಂಟ್ವಾಳ ಪುಂಜಾಲಕಟ್ಟೆ ರಸ್ತೆ ಅಗಲೀಕರಣ
ಬಂಟ್ವಾಳದ ಪುಂಜಾಲಕಟ್ಟೆ ರಸ್ತೆ ಅಗಲೀಕರಣ ಕೆಲಸ ನಡೆಯುತ್ತಿರುವ ಸಂದರ್ಭ ಪೈಪ್ ಒಡೆದು ಕೆಸರಿನೊಂದಿಗೆ ನೀರು ಬಾನೆತ್ತರಕ್ಕೆ ಚಿಮ್ಮಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಂಟ್ವಾಳದಿಂದ ಪುಂಜಾಲಕಟ್ಟೆವರೆಗೆ ರಸ್ತೆ ಅಗಲೀಕರಣ ಕೆಲಸ ನಡೆಯುತ್ತಿದ್ದು, ಬಂಟ್ವಾಳ ಬೈಪಾಸಿನ ಅಜಕಲ ಎಂಬಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ನೀರು ಬಾನೆತ್ತರಕ್ಕೆ ಚಿಮ್ಮುವ ದೃಶ್ಯ ಕಂಡುಬಂದಿತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.