ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್, ಜಮೀರ್ ಅಹ್ಮದ್ - ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ್
ರಾಣೆಬೆನ್ನೂರು/ ಬೆಂಗಳೂರು: ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್, ಹಾಗೂ ಮಾಜಿ ಸಚಿವ ಜಮೀರ್ ಅಹಮದ್ ತಮ್ಮ ಮತ ಚಲಾಯಿಸಿದರು. ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟೆಯ ಮತಗಟ್ಟೆ ಸಂಖ್ಯೆ 196 ರಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ್, ಪತ್ನಿ ಮಂಗಳ ಗೌರಿ ಜೊತೆ ಆಗಮಿಸಿ ಮತದಾನ ಮಾಡಿದರು. 7 ಗಂಟೆ 5 ನಿಮಿಷಕ್ಕೆ ಸರಿಯಾಗಿ ಕ್ಷೇತ್ರದಲ್ಲಿಯೇ ಮೊದಲ ಮತ ಚಲಾಯಿಸಿದರು. ಇನ್ನು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಬೆನ್ಸನ್ ಟೌನ್‌ನ ಉವತ್ತುಲ್ ಇಸ್ಲಾಂ ಕಾಲೇಜಿನಲ್ಲಿ ಸರತಿ ಸಾಲಿನಲ್ಲಿ ನಿಂತು ಮಾಜಿ ಸಚಿವ ಜಮೀರ್ ಅಹ್ಮದ್ ಮತದಾನ ಮಾಡಿದ್ದಾರೆ. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಜಮೀರ್ ಅಹ್ಮದ್, ರಿಜ್ವಾನ್ ಅರ್ಷದ್ಗೆ ಪ್ರತಿ ಬಾರಿಯೂ ಮೋಸವಾಗಿದೆ.ಈ ಬಾರಿ ಜನ ರಿಜ್ವಾನ್ ಮೇಲೆ ಹೆಚ್ಚು ಒಲವು ತೋರಲಿದ್ದಾರೆ. ಜನ ಈ ಬಾರಿ ಸರಿಯಾದವರನ್ನೇ ಆಯ್ಕೆ ಮಾಡ್ತಾರೆ ಎಂದು ಹೇಳಿದರು.