ಸದೃಢ ಸರ್ಕಾರ ರಚನೆ ಮಾಡುವ ಕಾಲ ಬಂದಿದೆ : ಸುತ್ತೂರು ಸ್ವಾಮೀಜಿ ಹೇಳಿಕೆ
ಮೈಸೂರು: ಸದೃಢ ಸರ್ಕಾರ ರಚನೆ ಮಾಡುವ ಕಾಲ ಬಂದಿದೆ, ತಪ್ಪದೇ ಮತ ಚಲಾಯಿಸಿ ಎಂದು ಸುತ್ತೂರು ಶ್ರೀಗಳ ಕರೆನೀಡಿದ್ದಾರೆ. ಇಂದು ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಾಲೇಜಿನಲ್ಲಿ ಮತ ಚಲಾಯಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳು, ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಈ ಮುಖಾಂತರ ಸದೃಢ ಸರ್ಕಾರವನ್ನು ರಚನೆ ಮಾಡುವ ಕಾಲ ಬಂದಿದೆ ಎಂದು ಅಭಿಪ್ರಾಯ ಪಟ್ಟರು.