ಅದ್ಧೂರಿಯಾಗಿ ಉದ್ಘಾಟನೆಗೊಂಡ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ - ಮಂತ್ರಾಲಯ
ರಾಯಚೂರಿನ ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವ ಧ್ವಜಾರೋಹಣ ಸಪ್ತರಾತ್ರೋತ್ಸವ ಸಮಾರಂಭಕ್ಕೆ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಚಾಲನೆ ನೀಡಿದರು. ಸುಮಾರು ಏಳು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ಮೊದಲ ದಿನವಾದ ಇಂದು ರಾಯರ ವೃಂದಾವನಕ್ಕೆ ನಿರ್ಮಲ ವಿಸರ್ಜನೆ, ರಾಯರ ಪಾದ ಪೂಜೆ, ಪಂಚಾಮೃತಾಭಿಷೇಕ, ಶ್ರೀ ಮೂಲ ರಾಘುಪತಿ ವೇದವ್ಯಾಸ ದೇವರ ಪೂಜೆ, ಅಲಂಕಾರ ಸಂತರ್ಪಾಣೆ, ಹಸ್ತೋದಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ಕಾರ್ಯ ನಡೆದವು. ಸಂಜೆ ವೇಳೆ ಗೋ ಪೂಜೆ, ಆಶ್ವ ಪೂಜೆ ನೇರವೇರಿಸಿ ಬಳಿಕ ಧಜ್ವರೋಹಣ ನೇರವೇರಿಸಿದ್ರು. ಬಳಿಕ ಶ್ರೀಗಳ ಅನುಗ್ರಹ ಸಂದೇಶ ನೀಡಿದ್ರು. ಈ ವೇಳೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.