ಬೀದಿಗಿಳಿದವರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು - ಬೈಕ್ ಸವಾರರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೊರೊನಾ ಹಿನ್ನೆಲೆ ದೇಶದ್ಯಾಂತ 21 ದಿನಗಳ ಲಾಕ್ಡೌನ್ ಘೋಷಣೆ ಮಾಡಿದ್ದಾರೆ. ಈ ನಡುವೆ ಶಿವಮೊಗ್ಗದಲ್ಲಿ ಜನ ಎಂದಿನಂತೆ ಓಡಾಟ ನಡೆಸುತ್ತಿದ್ದವರಿಗೆ ಪೊಲೀಸರು ವಾರ್ನಿಂಗ್ ನೀಡಿ, ಲಾಠಿ ರುಚಿ ತೋರಿಸಿದ್ದಾರೆ. ನಗರದ ವಿವಿಧ ಸರ್ಕಲ್ ಬಳಿ ನಿಂತಿದ್ದ ಪೊಲೀಸರು ಬೈಕ್ ಸವಾರರನ್ನು ತಡೆದು ವಿಚಾರಿಸುತ್ತಿದ್ದಾರೆ. ಜೊತೆಗೆ ಪಾಲಿಕೆ ವತಿಯಿಂದ ಕೊರೊನಾ ಬಗ್ಗೆ ಜಾಗೃತಿ ಹಾಗೂ ಎಚ್ಚರಿಕೆಯ ಪ್ರಚಾರ ನಡೆಸಲಾಗುತ್ತಿದೆ.