ಸಂಕ್ರಾಂತಿ 'ಸುಗ್ಗಿ-ಹುಗ್ಗಿ': ವಿಶೇಷ ಕಾರ್ಯಕ್ರಮದ ಮೂಲಕ ಉ.ಕರ್ನಾಟಕ ಸಂಪ್ರದಾಯದ ಅರಿವು - ಸಪ್ತಸ್ವರ ಸಂಗೀತ ನೃತ್ಯ ಸಾಂಸ್ಕೃತಿಕ ಸಂಸ್ಥೆ
ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಸಪ್ತಸ್ವರ ಸಂಗೀತ ನೃತ್ಯ ಸಾಂಸ್ಕೃತಿಕ ಸಂಸ್ಥೆ ವತಿಯಿಂದ 'ಸುಗ್ಗಿ-ಹುಗ್ಗಿ' ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ಈ ವೇಳೆ ಸಾಂಪ್ರದಾಯಿಕ ಶೈಲಿಯ ಉಡುಗೆ ತೊಟ್ಟು ಶೋಭಾನ ಮತ್ತು ಬಿಸುವ ಕಲ್ಲಿನ ಪದಗಳನ್ನು ಹಾಡಲಾಯಿತು. ಈ ಮೂಲಕ ಗ್ರಾಮೀಣ ಸೊಗಡು ಉಳಿಸಿ ಬೆಳೆಸುವ ಕೆಲಸ ನಡೆಯಿತು. ಇದೇ ವೇಳೆ ಎಳ್ಳು, ಶೇಂಗಾ ಹೋಳಿಗೆ, ರೊಟ್ಟಿ, ಚಟ್ನಿ ಹಾಗು ವಿವಿಧ ಕಾಳಿನ ಪಲ್ಲೆಗಳು ಬಾಯಲ್ಲಿ ನಿರೂರಿಸುವಂತಿತ್ತು. ಉತ್ತರ ಕರ್ನಾಟಕದ ಸಂಸ್ಕೃತಿಯನ್ನು ಯುವ ಪೀಳಿಗೆ ತಿಳಿಸುವ ಉದ್ದೇಶದಿಂದ ಸಪ್ತಸ್ವರ ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಪಾಟೀಲ್ ಹಾಗೂ ಉಪಾಧ್ಯಕ್ಷೆ ನಿರ್ಮಲಾ ಮಲಘಾನ ನೇತೃತ್ವದಲ್ಲಿ ಪ್ರತಿ ವರ್ಷ ಮಕರ ಸಂಕ್ರಮಣವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.
Last Updated : Jan 15, 2021, 5:31 PM IST