ಸಚಿವ ಸ್ಥಾನ ಕೇಳಿದ್ರೆ ಖುಷಿಯಿಂದ ಬಿಡಲು ಸಿದ್ಧ: ಮಾಧುಸ್ವಾಮಿ - ಸಚಿವ ಸ್ಥಾನ ಕೇಳಿದ್ರೆ ಖುಷಿಯಿಂದ ಬಿಡಲು ಸಿದ್ಧ
ತುಮಕೂರು: ಸಚಿವ ಸ್ಥಾನ ಕೇಳಿದ್ರೆ ಖುಷಿಯಿಂದ ಬಿಡಲು ಸಿದ್ಧ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ತುಮಕೂರಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಒಳ್ಳೆಯದಾಗುತ್ತೆ ಅಂದ್ರೆ ಶಾಸಕ ಸ್ಥಾನವನ್ನೂ ಕೂಡ ಬಿಡಲು ಸಿದ್ಧ. ನನಗೆ ರಾಜ್ಯದಲ್ಲಿ ಒಳ್ಳೆಯ ಸರ್ಕಾರ ಇರಲಿ ಎನ್ನುವ ಅಪೇಕ್ಷೆ ಇದೆ. ಬಹಳ ಸಂತೋಷದಿಂದ ಸಚಿವ ಸ್ಥಾನ ಬಿಟ್ಟುಕೊಡುತ್ತೇನೆ ಎಂದರು.