ಕರ್ನಾಟಕ

karnataka

ETV Bharat / videos

ಪಲ್ಸ್‌ ಪೋಲಿಯೋ ಅಭಿಯಾನಕ್ಕೆ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಶಾಸಕ ಚರಂತಿಮಠ ಚಾಲನೆ.. - ಪಲ್ಸ್ ಪೋಲಿಯೋ ಕಾರ್ಯಕ್ರಮ

By

Published : Jan 19, 2020, 2:48 PM IST

ರಾಷ್ಟ್ರೀಯ ಜಿಲ್ಲಾ ಮಟ್ಟದ ಪಲ್ಸ್‌ ಪೋಲಿಯೋ ಅಭಿಯಾನಕ್ಕೆ ಜಿ.ಪಂ. ಅಧ್ಯಕ್ಷೆ ಬಾಯಕ್ಕ ಮೇಟಿ ಹಾಗೂ ಶಾಸಕ ವೀರಣ್ಣ ಚರಂತಿಮಠ ಚಾಲನೆ ನೀಡಿದರು. ನವನಗರದ 47ನೇ ಸೆಕ್ಟರ್​ನಲ್ಲಿ ಮಗುವಿಗೆ ಲಸಿಕೆ ಹಾಕಿ ಮಾತನಾಡಿದ ಶಾಸಕ ಚರಂತಿಮಠ, ಚಿಕ್ಕ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ‌ ಇಡೀ‌ ದೇಶದಲ್ಲಿ ಪೋಲಿಯೋ ರೋಗ ನಿರ್ಮೂಲನೆ ಮಾಡಬೇಕಾಗಿದೆ ಎಂದರು. ತಾ.ಪಂ. ಅಧ್ಯಕ್ಷ ಚನ್ನನಗೌಡ ಪರನಗೌಡ, ಸಿಇಒ ಗಂಗೂಬಾಯಿ ಮಾನಕರ, ಎಡಿಸಿ ಮಹಾದೇವ ಮುರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ ಎನ್ ದೇಸಾಯಿ ಸೇರಿ ಇತರರು ಹಾಜರಿದ್ದರು.

ABOUT THE AUTHOR

...view details