ಸಿಎಎ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ - ಎನ್ಆರ್ಸಿ, ಎನ್ಪಿಆರ್, ಸಿಎಎ ಕಾಯ್ದೆ ವಿರುದ್ಧ ಉಪವಾಸ ಸತ್ಯಾಗ್ರಹ
ಮಂಗಳೂರು: ಎನ್ಆರ್ಸಿ, ಎನ್ಪಿಆರ್, ಸಿಎಎ ಕಾಯ್ದೆಯನ್ನು ಕೈಬಿಡುವಂತೆ ಒತ್ತಾಯಿಸಿ ಇಂದು ಮಂಗಳೂರಿನ ತಾಲೂಕು ಪಂಚಾಯತ್ ಮುಂಭಾಗ ವಿ ದಿ ಪೀಪಲ್ ಆಫ್ ಇಂಡಿಯಾ ವತಿಯಿಂದ ಉಪವಾಸ ಸತ್ಯಾಗ್ರಹ ನಡೆಯಿತು. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಈ ಉಪವಾಸ ಸತ್ಯಾಗ್ರಹ ನಡೆಯಿತು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಅಂಗವಾಗಿ ನಡೆದ ದಂಡಿ ಸತ್ಯಾಗ್ರಹದ 90 ನೇ ವರ್ಷಾಚರಣೆಯ ದಿನವಾದ ಇಂದು, ವಿ ದಿ ಪೀಪಲ್ ಆಫ್ ಇಂಡಿಯಾ ನೀಡಿದ ಕರೆಯಂತೆ ಈ ಉಪವಾಸ ಸತ್ಯಾಗ್ರಹದಲ್ಲಿ ಹಲವರು ಪಾಲ್ಗೊಂಡಿದ್ದರು.