ಹೆಚ್ಚುವರಿ ಪಾಠ,ವಿಶೇಷ ಕಾಳಜಿಯಿಂದ ಮಕ್ಕಳ ಸಾಧನೆ: ಝಂಜರವಾಡ ಪ್ರೌಢ ಶಾಲೆ ತಾಲೂಕಿಗೆ 3 ಸಾರಿ ಫಸ್ಟ್ - ಎಸ್ಎಸ್ಎಲ್ಸಿ ಪರೀಕ್ಷೆ ಪೂರ್ವ ತಯಾರಿ
ಶಾಲೆ ಗಂಟೆ ಹೊಡೆದ್ರೆ ಸಾಕು ಮಕ್ಕಳು ಮನೆ ಕಡೆ ಓಡ್ತಿರ್ತವೆ. ಶಿಕ್ಷಕರಿಗೆ ತಮ್ಮೂರಿಗೆ ಬಸ್ ಹಿಡಿದು ಹೋಗುವ ಧಾವಂತ. ಆದರೆ, ಈ ಊರಲ್ಲಿ ಹಂಗೇನಿಲ್ಲ. SSLC ಮಕ್ಕಳಿಗೆಂದೇ ಶಾಲೆ ಮುಂದಿನ ಆವರಣದಲ್ಲಿ ಕೂತು ಶಿಕ್ಷಕರೇ ವಿಶೇಷ ತರಗತಿ ನಡೆಸ್ತಾರೆ.