ಗೋವಿಂದ ಕಾರಜೋಳ ನೇತೃತ್ವದಲ್ಲಿ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ - ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಪೂರ್ವಭಾವಿ ಸಭೆ ನ್ಯೂಸ್
ಕಲಬುರಗಿ: ಇದೇ ಫೆಬ್ರವರಿ 5, 6, 7 ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ 85 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪೂರ್ವಭಾವಿ ಸಭೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಾಹಿತ್ಯ ಸಮ್ಮೇಳನದ 17 ಸಮಿತಿಗಳು ಕೈಗೊಂಡಂತಹ ಕಾರ್ಯಗಳು ಮತ್ತು ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಸಾಹಿತ್ಯ ಸಮ್ಮೇಳನ ಕೇವಲ ಸಮ್ಮೇಳನ ಆಗದೆ, ಜಾತ್ರೆ ರೂಪದಲ್ಲಿ ಐತಿಹಾಸಿಕ ಸಮ್ಮೇಳನ ಆಗಬೇಕು ಅನ್ನೋದೇ ನನ್ನ ಆಸೆ ಆಗಿದೆ ಎಂದು ಅವರು ಹೇಳಿದರು.