ಸಚಿವ ಸಂಪುಟ ವಿಸ್ತರಣೆ ಸಂದರ್ಭ ಬಿಕೋ ಎನ್ನುತ್ತಿತ್ತು ರಾಜಭವನದ ಹೊರಭಾಗ - ರಾಜಭವನದ ಹೊರಭಾಗ ಬಿಗಿ ಬಂದೋಬಸ್ತ್
ಇದೇ ಮೊದಲ ಬಾರಿಗೆ ಸಚಿವ ಸಂಪುಟ ವಿಸ್ತರಣೆ ಸಂದರ್ಭ ರಾಜಭವನದ ಹೊರಭಾಗ ಸಾಕಷ್ಟು ಬಿಕೋ ಎನ್ನುತ್ತಿತ್ತು. ಇದಕ್ಕೆ ಕಾರಣ ಅಭಿಮಾನಿಗಳ ಕೊರತೆಯಲ್ಲ, ಪೊಲೀಸ್ ಬಿಗಿ ಬಂದೋಬಸ್ತ್. ರಾಜಭವನದ ರಸ್ತೆಯ ಇಕ್ಕೆಲದ ಪಾದಚಾರಿ ಮಾರ್ಗದಲ್ಲಿ ಕಂಡು ಬರಬೇಕಿದ್ದ ಅಭಿಮಾನಿಗಳು ಈ ಬಾರಿ ಗೋಚರಿಸಲೇ ಇಲ್ಲ. ಅತಿಯಾದ ಭದ್ರತೆ ಇರುವ ಕಾರಣ ಸಾರ್ವಜನಿಕರ ಕೊರತೆ ಕಂಡುಬಂತು.