ಕಾರಿನ ದಾಖಲೆ ಕೇಳಿದ್ದಕ್ಕೆ ಪೊಲೀಸರಿಗೆ ಅವಾಚ್ಯ ಶಬ್ದ ಬಳಸಿದ ವೃದ್ದ : ದೂರು ದಾಖಲು - ಮಂಗಳೂರು ಪೊಲೀಸ್ ಮತ್ತು ವೃದ್ದ ಕಾರು ಚಾಲಕನ ನಡುವೆ ಮಾತಿನ ಚಕಮಕಿ
ಮಂಗಳೂರು: ಲಾಕ್ಡೌನ್ ವೇಳೆ ಅನಗತ್ಯವಾಗಿ ವಾಹನಗಳನ್ನು ತಿರುಗಾಡುವುದನ್ನು ನಿಯಂತ್ರಿಸುತ್ತಿದ್ದ ಪೊಲೀಸರಿಗೆ ವೃದ್ಧ ಕಾರು ಚಾಲಕರೊಬ್ಬರು ಅವಾಚ್ಯ ಪದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದ್ದು, ಈ ಬಗ್ಗೆ ವೃದ್ದ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಂಗಳೂರಿನ ಲಾಲ್‌ಬಾಗ್‌ನಲ್ಲಿ ಈ ಘಟನೆ ನಡೆದಿದ್ದು ಘಟನೆಯ ವಿಡಿಯೋ ವೈರಲ್ ಆಗಿದೆ. ಲಾಲ್‌ಬಾಗ್‌ನಲ್ಲಿರುವ ಜಿಲ್ಲಾ ನ್ಯಾಯಾಧೀಶರ ಮನೆಯ ಮುಂಭಾಗದಲ್ಲಿ ಪೊಲೀಸರು ಕಾರು ಚಾಲಕ ಸುರೇಶ್ ರಾವ್ ಎಂಬವವರು ತಡೆದು ಕಾರಿನ ಪಾಸ್ ಮತ್ತು ದಾಖಲೆ ಕೇಳಿದಾಗ ಪೊಲೀಸರನ್ನು ಅವಾಚ್ಯ ಪದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಬಗ್ಗೆ ಕರ್ತವ್ಯದಲ್ಲಿದ್ದ ಪೊಲೀಸರು ವೃದ್ಧನ ವಿರುದ್ದ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.