ಹೊಸಕೋಟೆ ಕ್ಷೇತ್ರದಲ್ಲಿ ಕೈ ಕೊಟ್ಟ ಮತ ಯಂತ್ರ, ವಿವಿ ಪ್ಯಾಟ್ - ಹೊಸಕೋಟೆ ಕ್ಷೇತ್ರದಲ್ಲಿ ಕೈ ಕೊಟ್ಟ ಮತಯಂತ್ರ, ವಿವಿ ಪ್ಯಾಟ್
ಹೊಸಕೋಟೆ: ಹೊಸಕೋಟೆ ಕ್ಷೇತ್ರದಲ್ಲಿ ಮತಯಂತ್ರ ಮತ್ತು ವಿವಿ ಪ್ಯಾಟ್ ಕೈ ಕೊಟ್ಟ ಹಿನ್ನೆಲೆ ಕಳೆದ ಒಂದು ಗಂಟೆಯಿಂದ ಮತದಾನ ಸ್ಥಗಿತಗೊಂಡಿದೆ. ಭುವನಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 49 ರಲ್ಲಿ ದೋಷ ಕಂಡುಬಂದಿದೆ. ಮತದಾನ ಸ್ಥಗಿತಗೊಂಡು ಒಂದು ಗಂಟೆಯಾದ್ರು ಸ್ಥಳಕ್ಕೆಅಧಿಕಾರಿಗಳು ಬಾರದ ಹಿನ್ನೆಲೆ ಚುನಾವಣಾಧಿಕಾರಿಗಳ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.