ಹೊಸ ವರ್ಷದ ಸಂಭ್ರಮ: ಅರಮನೆ ಆವರಣದಲ್ಲಿ ದೀಪಾಲಂಕಾರದ ಚಿತ್ತಾರ - ಮೈಸೂರು ಹೊಸ ವರ್ಷದ ಸಂಭ್ರಮಾಚರಣೆ ನ್ಯೂಸ್
ಮೈಸೂರು: ವಿಶ್ವವಿಖ್ಯಾತ ಅರಮನೆಯಲ್ಲಿ ಹೊಸ ವರ್ಷವನ್ನು ದೀಪಾಲಂಕಾರಗಳ ಮಧ್ಯೆ ಕಲರ್ಫುಲ್ ಆಗಿ ಪಟಾಕಿ ಸಿಡಿಸುವ ಮೂಲಕ ಆಚರಿಸಲಾಯಿತು. ಪೇಜಾವರ ಶ್ರೀಗಳ ನಿಧನದಿಂದ ರಾಜ್ಯದಲ್ಲಿ 3 ದಿನ ಶೋಕಾಚರಣೆ ಆಚರಿಸಿದ ಹಿನ್ನೆಲೆ ಮೈಸೂರಿನ ಅರಮನೆ ಆವರಣದಲ್ಲಿ ನಡೆಯುತ್ತಿದ್ದ ಮಾಗಿ ಉತ್ಸವವನ್ನು ಮುಂದೂಡಲಾಗಿತ್ತು. ಈ ಹಿನ್ನೆಲೆ ಜನವರಿ 1 ರ ರಾತ್ರಿ ಹೊಸ ವರ್ಷದ ಸಂಭ್ರಮ ಕಳೆಗಟ್ಟಿತ್ತು. ಇದರ ಅಂಗವಾಗಿ ವಿದ್ಯುತ್ ದೀಪಾಲಂಕಾರ, ಅರಮನೆಯ ಮುಂದೆ ಬಣ್ಣ ಬಣ್ಣದ ಪಟಾಕಿಗಳನ್ನು ಸಿಡಿಸುವ ಮೂಲಕ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲಾಯಿತು.