ನಾಳೆಯಿಂದ ಬೆಂಗಳೂರಿನ ರಸ್ತೆಗಿಳಿಯಲಿವೆ ರಸ್ತೆ ಗುಡಿಸುವ 12 ಹೊಸ ಯಂತ್ರಗಳು - ನಾಳೆಯಿಂದ ರಸ್ತೆಗಿಳಿಯಲಿವೆ 12 ಹೊಸ ರಸ್ತೆ ಗುಡಿಸುವ ಯಂತ್ರಗಳು
ಫೆ. 8ರಂದು ಸಿಎಂ ಉದ್ಘಾಟನೆ ಮಾಡಿದ್ದ ಕೋಟ್ಯಂತರ ರೂಪಾಯಿ ವೆಚ್ಚದ ಸ್ವೀಪಿಂಗ್ ಯಂತ್ರಗಳು ರಸ್ತೆಗಿಳಿಯಲು ಕಡೆಗೂ ಮುಹೂರ್ತ ಫಿಕ್ಸ್ ಆಗಿದೆ. ನಗರದ ಬ್ಯುಸಿ ರಸ್ತೆಗಳು, ಟೆಂಡರ್ ಶ್ಯೂರ್ ಹಾಗೂ ಮುಖ್ಯ ರಸ್ತೆಗಳ ಕಸ, ಧೂಳು ಸ್ವಚ್ಛ ಮಾಡಲು ಈಗಾಗಲೇ 5 ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ. ಇದೀಗ ಹೊಸದಾಗಿ 12 ಯಂತ್ರಗಳನ್ನು ವಿವಿಧ ವಲಯಗಳಿಗೆ ಕೆಲಸ ಆರಂಭಿಸಲು ನೀಡಲಾಗಿದೆ. ಈ ಸ್ವೀಪಿಂಗ್ ಮಷಿನ್ಗಳ 5 ವರ್ಷದ ನಿರ್ವಹಣೆಯನ್ನು ಯಂತ್ರ ಸರಬರಾಜು ಮಾಡಿದವರೇ ನೋಡಿಕೊಳ್ಳಬೇಕಿದೆ. ಪ್ರತಿ ದಿನ 40 ಕಿ.ಮೀ. ಉದ್ದದ ರಸ್ತೆ ಸ್ವಚ್ಛಗೊಳಿಸಬೇಕಿದೆ.
TAGGED:
road sweepers Machine