ಕ್ರಿಕೆಟ್ ಆಡುತ್ತಿದ್ದವರಿಗೆ ಬಸ್ಕಿ ಹೊಡೆಸಿದ ಪೊಲೀಸರು: ವಿಡಿಯೋ - ಮೈಸೂರು ಕೊರೊನಾ ನ್ಯೂಸ್
ಮೈಸೂರು: ಕೊರೊನಾ ಭೀತಿ ನಡುವೆಯೂ ಕ್ರಿಕೆಟ್ ಆಡುತ್ತಿದ್ದ ಯುವಕರಿಗೆ ಪೊಲೀಸರು ಲಾಠಿ ಹಿಡಿದು ಬಸ್ಕಿ ಹೊಡೆಸಿ ಬುದ್ದಿ ಹೇಳಿದ ಘಟನೆ ಕೆ.ಆರ್. ನಗರ ತಾಲೂಕಿನಲ್ಲಿ ನಡೆದಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಪೊಲೀಸರು ಗಸ್ತು ತಿರುಗುತ್ತಿರುವಾಗ ಕ್ರಿಕೆಟ್ ಆಡುತ್ತಿದ್ದ ಯುವಕರನ್ನು ಕಂಡು ಅವರನ್ನು ಕರೆದು ಸ್ಥಳದಲ್ಲೇ ಬಸ್ಕಿ ಹೊಡೆಸಿ ಕೊರೊನಾ ಕುರಿತು ಜಾಗೃತಿ ಮೂಡಿಸಿದರು.