ಸಾಮಾನ್ಯರಲ್ಲಿ ಅಸಾಮಾನ್ಯ ಪ್ರತಿಭೆ ಈ ಟ್ರಾಫಿಕ್ ವಾರ್ಡನ್: ಹೇಗೆ ಗೊತ್ತಾ? - Mysore traffic warden
ಮೈಸೂರು: ಕಳೆದ 34 ವರ್ಷಗಳಿಂದ ಯಾವುದೇ ಸಂಬಳ ಪಡೆಯದೇ ಟ್ರಾಫಿಕ್ ವಾರ್ಡನ್ ಆಗಿ ಮಹೇಶ್ವರ (77) ಎಂಬುವರು ಕೆಲಸ ಮಾಡುತ್ತಿದ್ದು, ಸಾಮಾಜಿಕ ಕಳಕಳಿ ಮೆರೆಯುತ್ತಿದ್ದಾರೆ. ಹೆಚ್ಚು ಟ್ರಾಫಿಕ್ ಸಮಸ್ಯೆ ಉಂಟಾಗುವ ಮೈಸೂರು ವಿವಿಯ ಕ್ರಾಫರ್ಡ್ ಹಾಲ್ನ ಸಿಗ್ನಲ್ ಬಳಿ ಬಂದು ನಿತ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಬಂದಿದ್ದು, ಈ ವಯಸ್ಸಿನಲ್ಲಿಯೂ ಸಮಯ ವ್ಯರ್ಥ ಮಾಡದೇ ಬೇರೆಯವರಿಗೆ ಸಹಾಯ ಮಾಡುತ್ತಿರುವ ಇವರ ಕಾರ್ಯಕ್ಕೆ ಹ್ಯಾಟ್ಸ್ ಆಫ್ ಹೇಳಲೇ ಬೇಕು.