ಅನ್ನದಾತರ ಟ್ರ್ಯಾಕ್ಟರ್ ಪರೇಡ್.. ಮೈಸೂರಿನಲ್ಲಿ ಪೊಲೀಸರು-ರೈತರ ನಡುವೆ ಮಾತಿನ ಚಕಮಕಿ.. ವಿಡಿಯೋ - ರೈತರ ಟ್ರಾಕ್ಟರ್ ರ್ಯಾಲಿ
ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ರೈತರ ಟ್ರ್ಯಾಕ್ಟರ್ ಪರೇಡ್ನಲ್ಲಿ ಭಾಗವಹಿಸಲು ಹೊರಟಿದ್ದ ಮೈಸೂರಿನ ರೈತರನ್ನು ತಡೆದ ಹಿನ್ನೆಲೆ ರೈತರು ಹಾಗೂ ಪೊಲೀಸರು ನಡುವೆ ಮಾತಿನ ಚಕಮಕಿ ನಡೆಯಿತು. ಮೈಸೂರಿನ ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಿದ ರೈತರು, ಟ್ರ್ಯಾಕ್ಟರ್ನಲ್ಲಿ ಬೆಂಗಳೂರಿಗೆ ತೆರಳಲು ಸಿದ್ಧವಾಗುತ್ತಿದ್ದಂತೆ ಪೊಲೀಸರು ತಡೆದಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು ಪೊಲೀಸರ ಜೊತೆ ವಾಗ್ವಾದಕ್ಕಿಳಿದರು.