ಸಂಚಲನ ಸೃಷ್ಟಿಸಿದ ಸಹಿ ಸಂಗ್ರಹ, ಸಿಎಂ ಕುರ್ಚಿ ವಿಚಾರ.. ಕಮಲಪಾಳಯ ಹೀಗನ್ನುತ್ತೆ..
ರಾಜ್ಯ ರಾಜಕೀಯದಲ್ಲಿ ಸಹಿ ಸಂಗ್ರಹ ಮತ್ತು ಸಿಎಂ ರಾಜೀನಾಮೆ ಹೇಳಿಕೆ ವಿಚಾರ ಬಿರುಗಾಳಿ ಎಬ್ಬಿಸಿದೆ. ಬಿಜೆಪಿ ಪಕ್ಷ ಮನೆಯೊಂದು ಮೂರು ಬಾಗಿಲಿನಂತಾಗಿದೆ. ಸಿಎಂ ಬದಲಾವಣೆಗಾಗಿ ಮಸಲತ್ತು ನಡೆಸುತ್ತಿದೆ ಎಂಬ ಸುದ್ದಿ ರಾಜ್ಯಾಂದ್ಯಂತ ಹರಿದಾಡುತ್ತಿದೆ. ಅಲ್ಲದೆ ಸಹಿ ಸಂಗ್ರಹ ಮಾಡಿ ಯಡಿಯೂರಪ್ಪನವರನ್ನ ಕುರ್ಚಿಯಿಂದ ಕೆಳಗಿಳಿಸಲು ಬಲೆ ಹೆಣೆಯಲಾಗಿದೆ ಎಂದು ಹೇಳಲಾಗುತ್ತಿದೆ. ಶಾಸಕ ಲಿಂಗಣ್ಣ, ಸಚಿವ ಬಿ ಸಿ ಪಾಟೀಲ್, ಸಂಸದ ಜಿ ಎಂ ಸಿದ್ಧೇಶ್ವರ್ ಹಾಗೂ ಸಚಿವ ಭೈರತಿ ಬಸವರಾಜ್ ಈ ಕುರಿತು ತಮ್ಮಗಳ ಅಭಿಪ್ರಾಯ ಹಂಚಿಕೊಂಡಿದ್ದಾರೆ.