ಕರ್ನಾಟಕ

karnataka

ETV Bharat / videos

ಮಗಳ ಮದುವೆಗೆ ಬಂದು ಹಾರೈಸಿದ್ದರು.. ಭಾವುಕರಾದ ಶಾಸಕ ಹರತಾಳು ಹಾಲಪ್ಪ - shivamogga

By

Published : Oct 29, 2021, 5:23 PM IST

ಶಿವಮೊಗ್ಗ: ಕಳೆದ ವಾರ ನಡೆದ ಮಗಳ ಮದುವೆಗೆ ಬಂದು ಹಾರೈಸಿದ್ದರು ಎಂದು ಪುನೀತ್​​ ರಾಜ್​​ಕುಮಾರ್​​ ಅವರನ್ನ ನೆನೆದು ಸಾಗರ ಶಾಸಕ ಹರತಾಳು ಹಾಲಪ್ಪ ಭಾವುಕರಾದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ದಿನಗಳ ಕಾಲ ವಿವಾಹ ಸಮಾರಂಭದಲ್ಲಿ ಆತ್ಮೀಯವಾಗಿ ಭಾಗವಹಿಸಿದ್ದರು. ವಿವಾಹ ಕಾರ್ಯಕ್ರಮಕ್ಕೆ ಭಾಗವಹಿಸಿದ್ದ ವೇಳೆ ನಮಸ್ಕಾರ ಸರ್ ಎಂದೆ. ಆಗ ಪುನೀತ್ ಅವರು ನೀವು ನಮಗೆ ಸರ್ ಅಂತಾ ಕರೆಯಬಾರದು. ನೀವು ನಮ್ಮ ಕುಟುಂಬದವರೇ.. ಆಗಾಗ ನಮ್ಮ ಮನೆಗೆ ನೀವು ಭೇಟಿ ನೀಡಬೇಕು. ಭೇಟಿ ನೀಡಿದರೆ ನಮ್ಮ ಅಪ್ಪ, ಅಮ್ಮನಿಗೆ ಖುಷಿಯಾಗುತ್ತದೆ ಎಂದಿದ್ದರು ಎಂದು ಪುನೀತ್ ನೆನೆದು ಭಾವುಕರಾದರು.

ABOUT THE AUTHOR

...view details