ದೇಶದ್ರೋಹದ ಚಟುವಟಿಕೆಗಳಿಗೆ ಕ್ಷಮೆ ಇರಬಾರದು..: ಸಿ.ಟಿ ರವಿ - Minister C.T. Ravi latest news
ದೇಶದ್ರೋಹದ ಚಟುವಟಿಕೆಗಳಿಗೆ ಯಾವುದೇ ಕಾರಣಕ್ಕೂ ಕ್ಷಮೆ ಇರಬಾರದು ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ. ನಗರದಲ್ಲಿ ಇಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ದೇಶದ್ರೋಹದ ಮಾನಸಿಕತೆ ಅಪಾಯಕಾರಿ. ಬೇರೆಲ್ಲ ತಪ್ಪುಗಳಿಗೆ ಕ್ಷಮೆ ಇದೆ. ಆದರೆ, ದೇಶದ್ರೋಹಕ್ಕೆ ಕ್ಷಮೆ ಇರಬಾರದು. ನಮ್ಮ ಸೈನಿಕರು -10 ಡಿಗ್ರಿಯಲ್ಲಿ ದೇಶವನ್ನು ಕಾಯುತ್ತಿದ್ದಾರೆ. ಗುಂಡಿಗೆ ಬಲಿಯಾಗುತ್ತಿದ್ದಾರೆ. ದೇಶದ ಒಳಗೆ ನೆಮ್ಮದಿಯಿಂದ ಬದುಕುತ್ತಿರುವವರು ಶತ್ರುಗಳಿಗೆ ಘೋಷಣೆ ಕೂಗಿದರೆ ಅದನ್ನು ಸಹಿಸುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ. ಅಮೂಲ್ಯಾಳ ಹಿಂದೆ ಒಂದು ದೊಡ್ಡ ತಂಡ ಇದೆ. ಇದನ್ನು ಆಕೆಯೇ ಒಪ್ಪಿಕೊಂಡಿದ್ದಾಳೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.