ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಷಯದಲ್ಲಿ ಸಿಎಂ ನಿಲುವು ಸ್ವಾಗತಾರ್ಹ: ಟಪಾಲ್ ಗಣೇಶ - ಗಣಿ ಉದ್ಯಮಿ ಟಪಾಲ್ ಗಣೇಶ
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿಲುವು ಸ್ವಾಗತಾರ್ಹ. ಮಹಾರಾಷ್ಟ್ರಕ್ಕೆ ಒಂದಿಂಚೂ ಭೂಮಿ ಬಿಡಲ್ಲ ಎಂಬ ನಿಲುವಿಗೆ ನನ್ನ ಸಹಮತವೂ ಇದೆ. ಆದ್ರೆ ಕರ್ನಾಟಕ ಆಂಧ್ರಪ್ರದೇಶ ಗಡಿವಿವಾದ ಹಾಗೂ ಗಡಿ ಗುರುತು ನಾಶ ಪಡಿಸಿರೊ ಪ್ರಕರಣವೊಂದು ಸುಪ್ರೀಂ ಕೋರ್ಟ್ನಲ್ಲಿದೆ. ಈವರೆಗೂ ರಾಜ್ಯ ಸರ್ಕಾರ ಕೈಗೊಂಡ ನಿಲುವುಗಳೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಗಣಿ ಉದ್ಯಮಿ ಟಪಾಲ್ ಗಣೇಶ ಆಗ್ರಹಿಸಿದ್ದಾರೆ. ಈ ಕುರಿತು ಗಣಿ ಉದ್ಯಮಿ ಟಪಾಲ್ ಗಣೇಶ ಅವರು ಕೆಲ ವಿಚಾರಗಳನ್ನು ಈಟಿವಿ ಭಾರತನೊಂದಿಗೆ ಅವರು ಹಂಚಿಕೊಂಡಿದ್ದಾರೆ.