ರೈತನ ನೆರವಿಗೆ ಬಂದ 'ಮೇಘದೂತ'... ಕೃಷಿ, ಹವಾಮಾನ ಮಾಹಿತಿ ನೀಡುತ್ತೆ ಈ ಮೊಬೈಲ್ ಆ್ಯಪ್ - Meghadootha Mobile App
ಭಾರತೀಯ ಹವಾಮಾನ ಇಲಾಖೆ, ಐಸಿಆರ್ ಹಾಗೂ ಕೃಷಿ ವಿಶ್ವವಿದ್ಯಾಲಯಗಳ ಸಹಾಯದಿಂದ ಮೇಘದೂತ ಎಂಬ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ. ಸ್ಥಳೀಯ ಭಾಷೆಯಲ್ಲೇ ಎಲ್ಲಾ ಕೃಷಿಯ ಮಾಹಿತಿ, ಹವಾಮಾನದ ವರದಿ ಸಿಗಲಿದೆ. ಯಾವ ಕಾಲದಲ್ಲಿ ಬಿತ್ತನೆ ಮಾಡಬೇಕು, ಯಾವ ಕಾಲದಲ್ಲಿ ಔಷಧಿ ಸಿಂಪಡಿಬೇಕು ಎಂಬ ಮಾಹಿತಿ ಅಷ್ಟೇ ಅಲ್ಲದೆ, ಹೈನುಗಾರಿಕೆ ನಡೆಸುವವರು, ಯಾವ ಸಮಯದಲ್ಲಿ ಯಾವೆಲ್ಲಾ ಔಷಧಿಗಳನ್ನು ಹಸುಗಳಿಗೆ ನೀಡಬೇಕೆಂಬ ಮಾಹಿತಿಯೂ ಇದರಲ್ಲಿ ಸಿಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಸಿಬ್ಬಂದಿ ಸರಸ್ವತಿ ಅವರು ಈ ಭಾರತ್ದೊಂದಿಗೆ ಮಾಹಿತಿ ಹಂಚಿಕೊಂಡರು.
Last Updated : Jan 7, 2020, 11:52 PM IST