ಇವರು ಮಂಗಳೂರಿನ ಮದರ್ ತೆರೇಸಾ.. ನಿತ್ಯ ನಿರ್ಗತಿಕರ ಸೇವೆಯೇ ಕೊರಿನ್ ರಸ್ಕಿನಾ ಕಾಯಕ! - ನಿರ್ಗತಿಕರು,
ನಿರ್ಗತಿಕರ, ರೋಗಿಗಳ ಸೇವೆಯನ್ನೇ ನಿತ್ಯ ಉಸಿರಾಗಿಸಿಕೊಂಡಿದ್ದ ಮದರ್ ತೆರೇಸಾ ವಿಶ್ವ ವಿಖ್ಯಾತಿ ಹೊಂದಿದ್ದು ನಮ್ಗೆಲ್ಲರಿಗೂ ಗೊತ್ತೇ ಇದೆ. ಅದೇ ರೀತಿ ಮಂಗಳೂರಿನಲ್ಲೊಬ್ಬರು ನಿತ್ಯ ನಿರ್ಗತಿಕರ,ಮಾನಸಿಕ ಅಸ್ವಸ್ಥರ ಸೇವೆಗಾಗಿಯೇ ತಮ್ಮ ಜೀವನವನ್ನೇ ಮುಡುಪಾಗಿಸಿದ್ದಾರೆ. ಯಾವುದೇ ಪ್ರಚಾರ ಬಯಸದೆ ಎಲೆಮರೆ ಕಾಯಿಯಂತೆ ತನ್ನ ಸೇವಾ ಕೈಂಕರ್ಯದಲ್ಲಿ ತೊಡಗಿದ್ದಾರೆ.