ಹೆಲ್ಮೆಟ್ ಹಾಕಿದ್ದರೂ ಫೈನ್ ಕೇಳಿದ ಪೊಲೀಸ್... ವಿಡಿಯೋ ವೈರಲ್ - kannada news, news kannada, etv bharat, helmet, bureaucracy, video viral, ವಿಡಿಯೋ ವೈರಲ್ , ಹೆಲ್ಮೆಟ್, ಫೈನ್, ಟ್ರಾಫಿಕ್ ಪೊಲೀಸ್, ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ,
ಫೈನ್ ಹಾಕಿಯೇ ತೀರಬೇಕು ಎಂದು ಜಿದ್ದಿಗೆ ಬಿದ್ದವರಂತೆ ವರ್ತಿಸಿದ ಕುಂದಾಪುರ ಟ್ರಾಫಿಕ್ ಪೊಲೀಸ್ ವಿರುದ್ಧ ಯುವಕನೋರ್ವ ಅಕ್ರೋಶ ವ್ಯಕ್ತಪಡಿಸಿದ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ ಸರ್ಕಲ್ ಬಳಿ ನಡೆದಿದೆ. ಎಲ್ಲಾ ದಾಖಲೆಗಳು ಸರಿಯಿದ್ದು, ಹೆಲ್ಮೆಟ್ ಧರಿಸಿದ್ದರೂ ಕೂಡ ಹೆಲ್ಮೆಟ್ ಧರಿಸಿಲ್ಲವೆಂದು ಪೊಲೀಸ್ ಸಿಬ್ಬಂದಿ ಯುವಕನೊಂದಿಗೆ ವಾಗ್ವಾದಕ್ಕಿಳಿದಿದ್ದರು ಎನ್ನಲಾಗಿದೆ. ಎಲ್ಲಾ ಸರಿಯಿದ್ದು ದಂಡ ಯಾಕೆ ಕಟ್ಟಬೇಕು ಎಂದು ಯುವಕ ಜಗಳವಾಡಿದ್ದಾನೆ. ಪೊಲೀಸನ ಈ ನಡೆಗೆ ಸಾರ್ವಜನಿಕರು ಕೂಡ ಅಕ್ರೋಶ ವ್ಯಕ್ತಪಡಿಸಿದ್ದು, ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
TAGGED:
fine