ಅಥಣಿಗೆ ಮಹೇಶ್ ಕುಮಟಳ್ಳಿ ಭೇಟಿ: ಹೂಗುಚ್ಛ ನೀಡಿ ಸ್ವಾಗತಿಸಿದ ಕಾರ್ಯಕರ್ತರು - ಮಹೇಶ್ ಕುಮಟಳ್ಳಿ ಅಥಣಿ ಭೇಟಿ ನ್ಯೂಸ್
ಅಥಣಿಗೆ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಭೇಟಿ ನೀಡಿದ್ದು, ಬಿಜೆಪಿ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಹೂಗುಚ್ಛ ನೀಡಿ, ಸಿಹಿ ಹಂಚಿ ಸ್ವಾಗತಿಸಿದರು. ಮೊದಲಿಗೆ ಶ್ರಿ ಕ್ಷೇತ್ರ ಸಿದ್ದೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಅವರು ದೇವರ ದರ್ಶನ ಪಡೆದರು. ನಂತರ ಕಾರ್ಯಕರ್ತರ ಜೊತೆ ಕೆಲಕಾಲ ಮಾತನಾಡಿ ತಮ್ಮ ಸ್ವಗೃಹಕ್ಕೆ ತೆರಳಿದರು.
Last Updated : Nov 16, 2019, 10:38 AM IST