ಕಂಬಳ ವೀರ ಪಾಣಿಲ ಎಕ್ಸ್ ಪ್ರೆಸ್ ಖ್ಯಾತಿಯ ಕೋಣ 'ಮೋಡ'ಗೆ ಅದ್ಧೂರಿ ಸ್ವಾಗತ - ಕೋಣ ಮೋಡನಿಗೆ ಅದ್ದೂರಿ ಸ್ವಾಗತ
ಉಡುಪಿ: ಕಂಬಳದ ರಿಯಲ್ ಹಿರೋ ಕೋಣಗಳು. ಇಲ್ಲಿ ಓಡುವ ಕೋಣಗಳ ವೇಗಕ್ಕೆ ಸಾಟಿಯಿಲ್ಲ. ಹಾಗಾಗಿ ಕೋಣಗಳೆಂದರೆ ಕರಾವಳಿಯ ಕಂಬಳ ಪ್ರೇಮಿಗಳಿಗೆ ಮನೆಯ ಮಗನಿದ್ದಂತೆ. 'ಮೋಡ' ಎಂಬ ಹೆಸರಿನ ಕಂಬಳ ಕೋಣಕ್ಕೆ ಹುಟ್ಟೂರನಲ್ಲಿ ಸನ್ಮಾನ ಮಾಡಲಾಯ್ತು. ಕಂಬಳ ಕ್ಷೇತ್ರದಲ್ಲಿ ಮಿಜಾರು ಅಶ್ವತ್ಥಾಪುರ ಶ್ರೀನಿವಾಸ ಗೌಡ ವಿಶ್ವದಾಖಲೆ ನಿರ್ಮಿಸಲು, ಇರುವೈಲು ಪಾಣಿಲ ಎಕ್ಸ್ ಪ್ರೆಸ್ ಖ್ಯಾತಿಯ 'ಮೋಡ' ಎಂಬ ಹೆಸರಿನ ಕೋಣವೇ ಕಾರಣ. ಕೋಣದ ಯಜಮಾನ ಅನೀಸ್, ಅನೂಪ್ ಅವರನ್ನು ಕೂಡಾ ಗೌರವಿಸಲಾಯ್ತು. ಇದೇ ಸಂದರ್ಭದಲ್ಲಿ ಮೋಡನ ಅಭಿಮಾನಿ ಬಳಗದಿಂದ ಕೋಣಕ್ಕೆ ಅದ್ಧೂರಿ ಸನ್ಮಾನ ಕಾರ್ಯಕ್ರಮ ಮಾಡಲಾಯಿತು. ಈವೇಳೆ ನೂರಾರು ಕ್ರೀಡಾಪಟುಗಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.