ಮೆಕ್ಕೆಜೋಳ ಬೆಳೆಗಾರರನ್ನು ಚಿಂತೆಗೀಡು ಮಾಡಿದ ಲದ್ದಿಹುಳು,ಕಂಗಾಲಾದ ಅನ್ನದಾತ - undefined
ಹಾವೇರಿ ಜಿಲ್ಲೆಯ ಮೆಕ್ಕೆಜೋಳ ಬೆಳೆಗಾರ ಇದೀಗ ಕಂಗಾಲಾಗಿದ್ದಾನೆ. ಅನ್ನದಾತ ಬೆಳೆದ ಮೆಕ್ಕೆಜೋಳಕ್ಕೆ ಇದೀಗ ಲದ್ದಿಹುಳ ಕಾಟ ಶುರುವಾಗಿದ್ದು ರೈತನಿಗೆ ದಿಕ್ಕು ತೋಚದಂತಾಗಿದೆ. ಮೊದಲೇ ಮುಂಗಾರು ಮಳೆ ರೈತರ ಬದುಕಿನಲ್ಲಿ ಜೊತೆ ಚೆಲ್ಲಾಟವಾಡುತ್ತಿದೆ. ಈ ಮಧ್ಯೆ ಬೇರೆ ಹುಳುವಿನ ಕಾಟ ಹೆಚ್ಚಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.