ಆಕಸ್ಮಿಕ ಬೆಂಕಿಗಾಹುತಿಯಾದ ನೂರಾರು ಅಡಿಕೆ, ತೆಂಗಿನ ಮರಗಳು - ಆಕಸ್ಮಿಕ ಬೆಂಕಿ ಅಡಿಕೆ, ತೆಂಗಿನ ಮರಗಳು ಸುಟ್ಟು ಕರಕಲು
ತುಮಕೂರು: ಆಕಸ್ಮಿಕ ಬೆಂಕಿ ತಗುಲಿ ನೂರಾರು ಅಡಿಕೆ ಹಾಗೂ ತೆಂಗಿನ ಮರಗಳು ಸುಟ್ಟು ಕರಕಲಾಗಿರೋ ಘಟನೆ ಮಧುಗಿರಿ ತಾಲೂಕು ಜಯನಗರ ಗ್ರಾಮದಲ್ಲಿ ನಡೆದಿದೆ. ರೈತ ನಾಗಭೂಷಣ್ ಎಂಬವರಿಗೆ ಸೇರಿದ ತೋಟದಲ್ಲಿ ಘಟನೆ ಸಂಭವಿಸಿದೆ. ತೋಟಕ್ಕೆ ಅಳವಡಿಸಲಾಗಿದ್ದ ಹನಿ ನೀರಾವರಿಯ ಪೈಪ್ಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ. ಭಾನುವಾರ ಆಗಿರುವುದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಬೆಂಕಿ ಆಕಸ್ಮಿಕದಿಂದ ಲಕ್ಷಾಂತರ ರೂ ನಷ್ಠವಾಗಿದ್ದು ಸರ್ಕಾರದಿಂದ ನಷ್ಟ ಭರಿಸುವಂತೆ ರೈತ ನಾಗಭೂಷಣ್ ಮನವಿ ಅಧಿಕಾರಿಗಳಿಗೆ ಮಾಡಿದ್ದಾರೆ.
TAGGED:
nut and coconut trees burned