ಕೊರೊನಾ ಭೀತಿ: ಕೋಟೆನಾಡಿನ ಅಲ್ಲಲ್ಲಿ ಹೋಳಿ ಹಬ್ಬ ಆಚರಿಸಿದ ಜನತೆ - ಹೋಳಿ ಹಬ್ಬ ಆಚರಣೆ
ಕೊರೊನಾ ವೈರಸ್ ಭೀತಿಯಿಂದ ದೇಶದ್ಯಾಂತ ಆತಂಕ ಮನೆ ಮಾಡಿದೆ. ಈ ನಡುವೆ ಹೋಳಿ ಹಬ್ಬಕ್ಕೆ ಉಪಯೋಗಿಸುವ ಬಣ್ಣದ ಮೇಲೆ ಇದು ಪರಿಣಾಮ ಬೀರಿದೆ. ಸಂಭ್ರಮದ ಹೋಳಿ ಆಚರಣೆಯ ವಾತಾವರಣ ಹಿಂದಿನ ವರ್ಷದಂತೆ ಈ ಬಾರಿ ಬಹುತೇಕ ಕಡೆ ಕಾಣಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ಸುದ್ದಿಗಳಿಗೆ ಕಿವಿಕೊಟ್ಟಿರುವ ಕೋಟೆನಾಡಿನ ಮಂದಿ ಬಣ್ಣದಿಂದ ದೂರ ಉಳಿದರೆ, ಬೆರಳಣಿಕೆಯಷ್ಟು ಜನ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು.