ಕರ್ನಾಟಕ

karnataka

ETV Bharat / videos

ಮಳೆಗೆ ಬಿದ್ದ ಮನೆ ಕಟ್ಟಲು ಕೈಜೋಡಿಸಿದ ಎನ್​ಎಸ್​ಎಸ್ ವಿದ್ಯಾರ್ಥಿಗಳು - ಮನೆ ಕಟ್ಟಲು ಕೈಜೋಡಿಸಿದ ಎನ್​ಎಸ್​ಎಸ್ ವಿದ್ಯಾರ್ಥಿಗಳು

By

Published : Mar 3, 2020, 8:15 AM IST

ಸಾಮಾನ್ಯವಾಗಿ ಎನ್​ಎಸ್​ಎಸ್ ಶಿಬಿರಗಳಲ್ಲಿ ಗ್ರಾಮ, ಶೌಚಾಲಯ ಸ್ವಚ್ಛತೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನ ಆಯೋಜಿಸಲಾಗಿರುತ್ತದೆ‌. ಆದ್ರೆ ಹಾವೇರಿ ಜಿಲ್ಲೆಯ ಸವಣೂರಿನ ಕೀರ್ತಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ವಿಶಿಷ್ಟ ಶ್ರಮದಾನದ ಮೂಲಕ ಗಮನ ಸೆಳೆದಿದ್ದಾರೆ. ತಾಲೂಕಿನ ಕುರುಬರ ಮಲ್ಲೂರಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಸುರಿದಿದ್ದ ಭಾರಿ ಮಳೆ ಹಾಗೂ ನೆರೆಯಿಂದ ಬಿದ್ದಿದ್ದ ಮಹಿಳೆವೋರ್ವಳ ಮನೆಯ ಮರು ನಿರ್ಮಾಣ ಕಾರ್ಯದಲ್ಲಿ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಕೈಜೋಡಿಸಿ ಮಾದರಿಯಾಗಿದ್ದಾರೆ. ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

For All Latest Updates

ABOUT THE AUTHOR

...view details