ಇಂದು ಹಾಸನಾಂಬೆ ದೇವಿ ದರ್ಶನಕ್ಕೆ ತೆರೆ, ಬಲಿಪಾಡ್ಯಮಿಗೆ ಹರಿದುಬಂದ ಭಕ್ತಸಾಗರ - ಹಾಸನಾಂಬೆ ದೇವಿ ದರ್ಶನ ಮುಕ್ತಾಯ
ಹಾಸನ: ಕಳೆದ 12 ದಿನದಿಂದ ಭಕ್ತವೃಂದಕ್ಕೆ ದರ್ಶನ ನೀಡಿದ್ಧ ಹಾಸನಾಂಬೆ ಇಂದು ಸಾರ್ವಜನಿಕರಿಗೆ ಕೊನೆ ದರ್ಶನ ಕರುಣಿಸಲಿದ್ದು. ಬಲಿಪಾಡ್ಯಮಿಯ ದಿನ ಭಕ್ತರ ದಂಡೇ ಹರಿದುಬಂದಿತ್ತು. ಜನಜಂಗುಳಿಯ ನಡುವೆ ಸಿದ್ದೇಶ್ವರಸ್ವಾಮಿಯ ರಥೋತ್ಸವದೊಂದಿಗೆ ಚಂದ್ರಮಂಡಲೋತ್ಸವ ಅದ್ದೂರಿಯಾಗಿ ಜರುಗಿತು. ರಥೋತ್ಸವವನ್ನ ಕಣ್ತುಂಬಿಕೊಂಡ ಭಕ್ತರು ಜಯಘೋಷಗಳನ್ನ ಕೂಗುತ್ತಾ ಭಕ್ತಿ ಪರಕಾಷ್ಠೆ ಮೆರೆದ್ರು.