ನಾವ್ ಹೆಣ್ಮಕ್ಳ್‌ರೀ,, ಮಾನ ಉಳಿಸಿಕೊಳ್ಳೋಕಾದ್ರೂ ಒಂದ್ ವ್ಯವಸ್ಥೆ ಮಾಡಿ ಪುಣ್ಯಾ ಕಟ್ಕೊಳ್ರೀ.. - ನೆರೆ ಸಂತ್ರಸ್ತರು
ಗದಗ: ಈ ನಮ್ ಸರ್ಕಾರಗಳು ಎಷ್ಟ್ ಕುರುಡಾಗ್ಯಾವ್ ನೋಡ್ರೀ. ಈಗಲೂ ಪ್ರವಾಹದಿಂದಾಗಿ ಸಂತ್ರಸ್ತರು ಹೊಟ್ಟೆಗೆ ಹಿಟ್ಟಿಲ್ಲದೇ ಕಂಗಾಲಾಗಿದಾರೆ. ತಲೆ ಮೇಲೆ ಸೂರು ಅಂತೂ ಕೇಳಬೇಡಿ. ಇದೆಲ್ಲ ಅದ್ಹೇಗೆ ಸಹಿಸಿಕೊಂಡಾರು. ಆದರೆ, ಸಂತ್ರಸ್ತ ಮಹಿಳೆಯರಿಗೆ ಈಗ ಕಾಡ್ತಿರೋದು ಮರ್ಯಾದೆಯ ಪ್ರಶ್ನೆ. ಅಧಿಕಾರಿಗಳು ಮಾತ್ರ ಕಣ್ಣು-ಕಿವಿ ಇಲ್ಲದಂತಾಗಿಬಿಟ್ಟಿದಾರೆ.