ಕರ್ನಾಟಕ

karnataka

ETV Bharat / videos

ದಸರಾ ಆಹಾರ ಮೇಳದಲ್ಲಿ 'ಬಂಬೂ ಬಿರಿಯಾನಿ'ಗೆ ಫುಲ್ ಡಿಮ್ಯಾಂಡ್: ಮಾಡುವ ವಿಧಾನ ಹೀಗೆ..

By

Published : Oct 3, 2019, 5:11 PM IST

ಈ ಬಾರಿಯಾ ಮೈಸೂರು ದಸರಾ ಆಹಾರ ಮೇಳದಲ್ಲಿ ಕಾಡಿನಲ್ಲಿ ಇರುವ ಹಾಡಿಯ ಜನ ಉಪಯೋಗಿಸುತ್ತಿದ್ದ ಬಂಬೂ ಬಿರಿಯಾನಿ ಮಾಡಲಾಗಿದ್ದು, ನಾನ್​ವೆಜ್ ಪ್ರಿಯರ ಬಾಯಲ್ಲಿ ನೀರೂರಿಸುತ್ತಿದೆ.‌ ಹಿಂದೆ ಹಾಡಿಯಲ್ಲಿ ಆದಿವಾಸಿಗಳು ಪ್ರಕೃತಿಯಲ್ಲೇ ಸಿಗುವ ಆಹಾರ ಪದಾರ್ಥಗಳನ್ನು ತಿನ್ನುತ್ತಿದ್ದರು.‌ ಈ ಸಂದರ್ಭ ಕಾಡಿನಲ್ಲಿ ಸಿಗುವ ಬಿದಿರು ಬಳಸಿ ಪ್ರಾಣಿಗಳ ಮಾಂಸವನ್ನು ಬಿದಿರು ಅಕ್ಕಿಯ ಜೊತೆ ಸೇರಿಸಿ ಬೇಯಿಸಿ ತಿನ್ನುತ್ತಿದ್ದರು. ಇದರಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಅದೇ ರೀತಿ ದಸರಾದ ಆಹಾರ ಮೇಳದಲ್ಲಿ ಹೆಚ್.ಡಿ ಕೋಟೆ ತಾಲೂಕಿನ ಆದಿವಾಸಿಗಳು ಕಾಡಿನಿಂದ ಬಿದಿರನ್ನು ತಂದು ಬಿರಿಯಾನಿ ಮಾಡಿದ್ದು, ಈ ಬಿರಿಯಾನಿಗೆ ಫುಲ್ ಡಿಮ್ಯಾಂಡ್ ಬಂದಿದೆ. ಹಾಗಾದರೆ ಈ ಬಂಬೂ ಬಿರಿಯಾನಿಯನ್ನು ಹೇಗೆ ಮಾಡುತ್ತಾರೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಿ.

ABOUT THE AUTHOR

...view details