ವಾಯುಭಾರ ಕುಸಿತ : ತುಮಕೂರು ಜಿಲ್ಲೆಯನ್ನು ತಬ್ಬಿದ ಇಬ್ಬನಿ.. - ತುಮಕೂರಿನಲ್ಲಿ ಇಬ್ಬನಿ ವಾತಾವರಣ
ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಎಫೆಕ್ಟ್ ತುಮಕೂರು ಜಿಲ್ಲೆಗೂ ತಟ್ಟಿದೆ. ಅದರಲ್ಲೂ ಚಿಕ್ಕನಾಯಕನಹಳ್ಳಿ ಹಾಗೂ ತುಮಕೂರು ತಾಲೂಕುಗಳ ವ್ಯಾಪ್ತಿಯಲ್ಲಿ ಸಂಪೂರ್ಣ ಮಂಜು ಮುಸುಕಿದ (fog covered) ವಾತಾವರಣವಿದೆ. ದೇವರಾಯನದುರ್ಗ ಪ್ರವಾಸಿ ತಾಣವಂತೂ ಮಂಜಿನಿಂದ ಮಬ್ಬಾಗಿದೆ. ಪರಿಣಾಮ ವಾಹನ ಸವಾರರು ಹೆಡ್ಲೈಟ್ ಹಾಕಿಕೊಂಡು ಸಂಚರಿಸುತ್ತಿದ್ದಾರೆ. ಅಲ್ಲದೇ, ಛತ್ರಿ ಹಾಗೂ ಬೆಚ್ಚನೆಯ ಬಟ್ಟೆಗಳನ್ನು ಧರಿಸಿಕೊಂಡು ಓಡಾಡುತ್ತಿದ್ದಾರೆ.