'ಮಾಸ್ತಿಗುಡಿ' ದುರಂತ ನೆನಪಿಸಿದ 'ಲವ್ ಯೂ ರಚ್ಚು' ಇನ್ಸಿಡೆಂಟ್! - ಕನ್ನಡ ಸಿನಿಮಾ ಲವ್ ಯೂ ರಚ್ಚು
ಸ್ಯಾಂಡಲ್ವುಡ್ನಲ್ಲಿ ಹುಚ್ಚು ಸಾಹಸಕ್ಕೆ ಬಡ ಕಲಾವಿದರು ಬಲಿಯಾಗುವ ಘಟನೆ ಮರುಕಳಿಸುತ್ತಲೇ ಇವೆ. ಎಷ್ಟೇ ದುರಂತಗಳು ನಡೆದು ಎಚ್ಚರಿಕೆ ನೀಡಿದರೂ ಬುದ್ದಿಕಲಿಯದ ಸಾಹಸ ನಿರ್ದೇಶಕರು ಅಮಾಯಕರ ಬಲಿದಾನಕ್ಕೆ ಕಾರಣವಾಗುತ್ತಿದ್ದಾರಾ ಅನ್ನೋ ಅನುಮಾನಗಳು ಜನರ ಮನಸಲ್ಲಿ ಮೂಡುತ್ತಿವೆ. 2016 ನವೆಂಬರ್ 7 ರಲ್ಲಿ ನಡೆದ ಮಾಸ್ತಿಗುಡಿ ದುರಂತ, ಆಗ ತಾನೆ ಸ್ಯಾಂಡಲ್ವುಡ್ನಲ್ಲಿ ಬೆಳೆಯುತ್ತಿದ್ದ ಇಬ್ಬರು ಪ್ರತಿಭಾವಂತ ಕಲಾವಿದರ ಅಂತ್ಯಕ್ಕೆ ಕಾರಣವಾಗಿತ್ತು. ಸದ್ಯ ಅಜಯ್ ರಾವ್ ಅಭಿನಯದ ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ನಡೆದ ಘಟನೆ ಮಾಸ್ತಿಗುಡಿ ದುರಂತವನ್ನು ನೆನಪಿಸುತ್ತಿದೆ ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ..