ಹಾಸನ: ಎತ್ತಿನಹೊಳೆ ಯೋಜನೆ ಪರಿಹಾರಕ್ಕೆ ಆಗ್ರಹಿಸಿ ರೈತರಿಂದ ಪ್ರತಿಭಟನೆ - ರೈತರ ಪ್ರತಿಭಟನೆ
ಎತ್ತಿನಹೊಳೆ ಯೋಜನೆ ಆದರೆ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದ ಜನರಿಗೆ ನೀರು ಸಿಗುತ್ತೆ ಎಂದು ಹೇಳಿ ಸರ್ಕಾರ ಸಾವಿರಾರು ರೈತರ ಜಮೀನು ವಶಪಡಿಸಿಕೊಂಡಿತ್ತು. 2014 ಫೆ. 5ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಲ್ಲಿ ಚಾಲನೆ ನೀಡುವ ಮೂಲಕ ಯೋಜನೆಗೆ ಹಸಿರು ನಿಶಾನೆ ತೋರಿದ್ರು. ಇದಕ್ಕಾಗಿ ಸಕಾಲದಲ್ಲಿ ಪರಿಹಾರ ಕೂಡ ಒದಗಿಸಿ ಕೊಡೋದಾಗಿ ತಿಳಿಸಲಾಗಿತ್ತು. ಆದ್ರೆ ಸೂಕ್ತ ಪರಿಹಾರ ಸಿಗದೆ ರೈತರು ಕಂಗಾಲಾಗಿದ್ದಾರೆ.