ಕರ್ನಾಟಕ

karnataka

ETV Bharat / videos

ತಜ್ಞರು ಲಾಕ್ ಡೌನ್ ಮಾಡಿ ಅಂತ ಹೇಳಿಲ್ಲ, ಟಫ್ ರೂಲ್ಸ್ ಜಾರಿ ಮಾಡಲು ಶಿಫಾರಸು ಮಾಡಿದ್ದಾರೆ: ಡಿಕೆಶಿ - ಬೆಂಗಳೂರು ಲಾಕ್​ಡೌನ್​

By

Published : Apr 20, 2021, 9:01 PM IST

ರಾಜ್ಯಪಾಲರು ಕರೆದಿದ್ದ ವಿಡಿಯೋ ಸಂವಾದದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿದರು. ​ತಜ್ಞರು ಲಾಕ್ ಡೌನ್ ಮಾಡಿ ಅಂತ ಹೇಳಿಲ್ಲ. ಕೆಲವು ಟಫ್ ರೂಲ್ಸ್ ಜಾರಿ ಮಾಡಲು ಶಿಫಾರಸು ಮಾಡಿದ್ದಾರೆ. ಸರ್ಕಾರ ಗೊಂದಲದ ಗೂಡಾಗಿದೆ. ಇಲ್ಲಿ ಅನುಭವದ ಕೊರತೆ ಇದೆ. ತಜ್ಞರ ಸಮಿತಿ ನೀಡಿದ ಮಾರ್ಗದರ್ಶನವನ್ನು ಪಾಲಿಸದೇ ಇರುವುದು ಇಂದಿನ ಸಂಪೂರ್ಣ ವೈಫಲ್ಯಕ್ಕೆ ಕಾರಣ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬರುವಂತೆ ಕಾಣ್ತಿದೆ. ವಿಪಕ್ಷವಾಗಿ ನಮ್ಮ ಅಭಿಪ್ರಾಯ ನಾವು ಹೇಳಿದ್ದೇವೆ ಮುಂದಿನದು ಅವರ ಇಷ್ಟ ಎಂದರು.

ABOUT THE AUTHOR

...view details