ಕಬಿನಿ ಹಿನ್ನೀರಿನಲ್ಲಿ ಸಫಾರಿ ವಾಹನ ಹಿಮ್ಮೆಟ್ಟಿಸಿದ ಆನೆಗಳ ಹಿಂಡು: ವಿಡಿಯೋ ವೈರಲ್ - Elephant team attack on vehicle
ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಬಿನಿ ಹಿನ್ನೀರಿನಲ್ಲಿ ಸಫಾರಿ ವಾಹನವನ್ನು ಆನೆಗಳ ಹಿಂಡು ಹಿಮ್ಮೆಟ್ಟಿಸಿದೆ. ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಹಿನ್ನೀರಿನಲ್ಲಿ ಸಫಾರಿ ಮುಗಿಸಿ, ವಾಹನ ವಾಪಸ್ ತೆರಳುವಾಗ ಆನೆಯೊಂದು ದಾಳಿ ಮಾಡಲು ಮುಂದಾಗಿ ಓಡಿ ಬರುತ್ತಿರುವುದನ್ನು ಕಂಡ ಆನೆಗಳ ಹಿಂಡು, ಒಂಟಿ ಆನೆ ಅಪಾಯಕ್ಕೆ ಸಿಲುಕಿರಬಹುದು ಎಂದು ಭಾವಿಸಿ, ಅವುಗಳೂ ಓಡಿ ಬಂದಿವೆ. ಈ ವೇಳೆ ವೇಗವಾಗಿ ವಾಹನ ಚಲಾಯಿಸುವ ಮೂಲಕ ಆನೆ ದಾಳಿಯಿಂದ ಸಫಾರಿಗರನ್ನು ಚಾಲಕ ರಕ್ಷಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸದ್ದು ಮಾಡುತ್ತಿದೆ.