ಕಲಬುರಗಿಯ ಹಲವೆಡೆ ಭಾರಿ ಸದ್ದು, ಭೂಕಂಪದ ಅನುಭವ... ಆತಂಕದಲ್ಲಿ ಜನರು - ಭೂಕಂಪ ಲೇಟೆಸ್ಟ್ ನ್ಯೂಸ್
ಕಲಬುರಗಿ: ಜಿಲ್ಲೆಯ ಚಿಂಚೋಳಿ, ಕಾಳಗಿ, ಸೇಡಂ ತಾಲೂಕಿನ ಹಲವು ಗ್ರಾಮಗಳಲ್ಲಿ ನಿನ್ನೆ ರಾತ್ರಿ ಭೂಮಿ ಕಂಪಿಸಿದ ಅನುಭವವಾಗಿದೆ. ಜೊತೆಗೆ ಭಾರಿ ಶಬ್ದ ಕೇಳಿ ಬಂದಿದೆ. ಅಲ್ಲದೇ ನಿನ್ನೆ ಬೆಳಗ್ಗೆ ಕೂಡ ಕೆಲವೆಡೆ ಭಾರಿ ಶಬ್ದ ಕೇಳಿ ಬಂದಿತ್ತು. ನಿನ್ನೆ ಜಿಲ್ಲೆಯಲ್ಲಾದ ಭಾರಿ ಶಬ್ದಕ್ಕೆ ಜನರು ಭಯದ ವಾತಾವರಣದಲ್ಲೇ ದಿನ ಕಳೆಯುವಂತಾಗಿದೆ.