ಬಿಎಂಟಿಸಿ ಕಚೇರಿಯಲ್ಲಿ ಕುಡುಕನ ದಾಂಧಲೆ, ಪೀಠೋಪಕರಣ ಧ್ವಂಸ - ನಂದಿನಿ ಲೇಔಟ್ ಪೊಲೀಸ್ ಸ್ಟೇಷನ್
ಬೆಂಗಳೂರು: ನಗರದ ಲಗ್ಗೆರೆಯ ಬಿಎಂಟಿಸಿ ಕಚೇರಿಗೆ ಕುಡುಕನೊಬ್ಬ ನುಗ್ಗಿ, ಪೀಠೋಪಕರಣ ಧ್ವಂಸ ಮಾಡಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ನಿನ್ನೆ ರಾತ್ರಿ ಬಿಎಂಟಿಸಿ ಕಚೇರಿಯ ಬೀಗ ಒಡೆದು, ಒಳಗೆ ನುಗ್ಗಿ ಮದ್ಯದ ಅಮಲಿನಲ್ಲಿ ಕೂಗಾಡಿ, ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾನೆ. ಸದ್ಯ ಆರೋಪಿಯನ್ನು ಮುನೇಶ್ವರನಗರದ ಬಡಾವಣೆ ನಿವಾಸಿಯಾದ ಹರೀಶ್ ಎಂದು ಗುರುತಿಸಲಾಗಿದ್ದು, ನಂದಿನಿ ಲೇಔಟ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.