ಕೊರೊನಾ ಭೀತಿ: ಗ್ರಾಮಸ್ಥರನ್ನು ಬಿಟ್ಟು ಬೇರೆಯವರಿಗೆ ನೋ ಎಂಟ್ರಿ - ತೂಬಗೆರೆ ಗ್ರಾಮಸ್ಥರ ಲಾಕ್ ಡೌನ್ ಆದೇಶ
ದೊಡ್ಡಬಳ್ಳಾಪುರ: ಕೊರೊನಾ ವೈರಸ್ ಹಿನ್ನೆಲೆ ದೇಶಾದ್ಯಂತ ಲಾಕ್ ಡೌನ್ ಜಾರಿ ಮಾಡಲಾಗಿದೆ. ಹಾಗೆಯೇ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮಸ್ಥರು ಲಾಕ್ ಡೌನ್ ಆದೇಶ ಪಾಲಿಸುತ್ತಿದ್ದಾರೆ. ಗ್ರಾಮಸ್ಥರನ್ನು ಬಿಟ್ಟು ಬೇರೆ ಯಾರು ನಮ್ಮ ಗ್ರಾಮದೊಳಗೆ ಬಿಡುವುದಿಲ್ಲ, ಕೇವಲ ಸರ್ಕಾರಿ ಅಧಿಕಾರಿಗಳಿಗೆ ತಪಾಸಣೆ ಮಾಡಲು ಮಾತ್ರ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.