ಬೆಂಗಳೂರಲ್ಲಿ ಕೆಎಸ್ಆರ್ಟಿಸಿ ಬಸ್ಗಳು ಖಾಲಿ ಖಾಲಿ... ಕೊರೊನಾಗೆ ಹೆದರಿದ್ರಾ ಜನ? - ಬೆಂಗಳೂರು ಕೆಎಸ್ಆರ್ಟಿಸಿ ಬಸ್ ಸೇವೆ ನ್ಯೂಸ್
🎬 Watch Now: Feature Video
ಬೆಂಗಳೂರು: ಮೂರನೇ ದಿನವೂ ಸಹ ಕೆಎಸ್ಆರ್ಟಿಸಿ ಬಸ್ ಸೇವೆ ಆರಂಭವಾಗಿದ್ದು, ಮೂರು ಸಾವಿರ ಬಸ್ಗಳನ್ನ ಓಡಿಸಲು ನಿಗಮ ನಿರ್ಧಾರ ಮಾಡಿದೆ. ಮುಂಜಾನೆ 7 ಗಂಟೆಯಿಂದ ಬಸ್ ವ್ಯವಸ್ಥೆ ಇದ್ದರೂ ಕೂಡ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಮೊದಲ ದಿನ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್ ಬಿಡಲಾಗಿತ್ತು. ಹೀಗಾಗಿ ಮೇ 19ರಂದು 1,606 ಬಸ್ಗಳಲ್ಲಿ 53,506 ಪ್ರಯಾಣಿಕರು, ಮೇ 20ರಂದು 2,633 ಬಸ್ ಮತ್ತು 81,593 ಪ್ರಯಾಣಿಕರು ಸಂಚಾರ ಮಾಡಿದ್ದರು. ಆದರೆ ಇಂದು ಮುಂಜಾನೆಯಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.