ಪಾವಗಡದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ.. - ಪಾವಗಡದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
ಪಾವಗಡ ತಾಲೂಕಿನ ಶೈಲಾಪುರ ಗ್ರಾಮದ ಬೆಟ್ಟದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿವೋರ್ವನ ಶವ ಪತ್ತೆಯಾಗಿದೆ. ಚಳ್ಳಕೆರೆ ತಾಲೂಕಿನ ಪರುಶರಾಂಪುರದ ರಾಮಾಂಜಿನಪ್ಪ (45) ಮೃತ ವ್ಯಕ್ತಿ. ಈತ ಮಾನಸಿಕ ಅಸ್ವಸ್ಥನಾಗಿದ್ದು ಶೈಲಾಪುರ ಗ್ರಾಮಕ್ಕೆ ತನ್ನ ತಂಗಿಯನ್ನು ನೋಡಲು ಬಂದು ವಾಪಸಾಗುವ ವೇಳೆ ಬೆಟ್ಟಕ್ಕೆ ತೆರಳಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ ಎನ್ನಲಾಗ್ತಿದೆ. ಘಟನಾ ಸ್ಥಳಕ್ಕೆ ಆರಸೀಕೆರೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.